ನವದೆಹಲಿ: ನಾಯಕ ಶುಭಮಾನ್ ಗಿಲ್ (70 ರನ್, 45 ಎಸೆತ, 4 ಬೌಂಡರಿ, 5 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಅನುಭವಿ ಜೋಸ್ 2 (52 5, 27 2, 3, 5 ) ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ 19ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಬೃಹತ್ ಮೊತ್ತ ಪೇರಿಸಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸತತ ಮೂರನೇ ಟಾಸ್ ಗೆದ್ದ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಘಾತದ ನಡುವೆಯೂ ಜೋಸ್ ಬಟ್ಲರ್ ಅರ್ಧಶತಕದಿಂದ ಗುಜರಾತ್ ಟೈಟಾನ್ಸ್ ಚೇತರಿಸಿಕೊಂಡಿತು. ನಂತರ ಶುಭಮಾನ್ ಗಿಲ್ ಮತ್ತು ಅಂಡರ್ ವಾಷಿಂಗ್ಟನ್ ಸುಂದರ್ (55 ರನ್, 32 ಎಸೆತ, 6 ಬೌಂಡರಿ, 2 ಸಿಕ್ಸರ್) ದಿಟ್ಟ ಜತೆಯಾಟದ ಬಲದಿಂದ ಗುಜರಾತ್ ಟೈಟಾನ್ಸ್ 4 ವಿಕೆಟ್‌ಗೆ 210 ರನ್ ಕಲೆಹಾಕಿದೆ. ಸ್ಲಾಗ್ ಓವರ್‌ಗಳಲ್ಲಿ ಡೆಲ್ಲಿ ಬೌಲರ್‌ಗಳ ಶಿಸ್ತಿನ ದಾಳಿಯ ಹೊರತಾಗಿಯೂ ಗುಜರಾತ್ 49 ರನ್ ದೋಚಿತು. ಅನಾರೋಗ್ಯದಿಂದ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಶುಭಮಾನ್ ಗಿಲ್ ಮರಳಿದರು.
ಬಟ್ಲರ್ ಬುನಾದಿ ಮೊದಲ ಓವರ್‌ನಲ್ಲಿ 11 ರನ್
ಮುಕೇಶ್ ಕುಮಾರ್ ಎಸೆದ ಕಸಿದ ಸಾಯಿ ಸುದರ್ಶನ್ (12), ಶುಭಮಾನ್ ಗಿಲ್ ಜೋಡಿ ಗುಜರಾತ್ ಗೆ ನಿರೀಕ್ಷಿತ ಆರಂಭ ಒದಗಿಸಲಿಲ್ಲ. ಮುಕೇಶ್ ಎಸೆದ ಮರು ಓವರ್‌ನಲ್ಲಿ ಸುದರ್ಶನ್ ಬೌಲ್ಡ್ ಆದರು. ಆಗ, ಗಿಲ್ ಜತೆಗೂಡಿದ ಜೋಸ್ ಬಟ್ಲರ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಡೆಲ್ಲಿ ಬೌಲರ್‌ಗಳಿಗೆ ಸವಾಲೆಸೆದ ಬಟ್ಲರ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 32 ಎಸೆತಗಳಲ್ಲಿ 60 ರನ್ ಕಸಿದರು. ಇದರಲ್ಲಿ ಬಟ್ಲರ್ ಒಬ್ಬರೇ 52 ರನ್ ಸೇರಿಸಿದರೆ, ಗಿಲ್ ಬೆಂಬಲ ನೀಡಿದರು. 8ನೇ ಓವರ್‌ನಲ್ಲಿ ಕುಲದೀಪ್ ಯಾದವ್, ಬಟ್ಲರ್ ವಿಕೆಟ್ ಪಡೆದು ಈ ಜತೆಯಾಟ ಮುರಿದರು.
`ಶುಭಮಾನ್ ಗಿಲ್
ಗಿಲ್-ಸುಂದರ್ ಶತಕದ ಜತೆಯಾಟ
ಬಟ್ಲರ್ ನಿರ್ಗಮನ ನಂತರ ಗಿಲ್ ಜತೆಯಾದ ವಾಷಿಂಗ್ಟನ್ ಸುಂದರ್ ತಂಡದ ಮೊತ್ತ ಏರಿಸಲು ನೆರವಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 61 ಎಸೆತಗಳಲ್ಲಿ 104 ರನ್ ಪೇರಿಸಿದರು.
ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಗಿಲ್ ನಂತರ ಆಕ್ರಮಣಕಾರಿ ಆಟಕ್ಕಿಳಿದರು. 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗಿಲ್‌ಗೆ ಸಮರ್ಥ ಬೆಂಬಲ ಒದಗಿಸಿದ ವಾಷಿಂಗ್ಟನ್ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ವಿಪ್ರಜ್ ಎಸೆದ 12ನೇ ಓವರ್‌ನಲ್ಲಿ ಇವರಿಬ್ಬರು ಬರೋಬ್ಬರಿ 23 ರನ್ ಕಸಿದರು. 18ನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ, ಗಿಲ್ ವಿಕೆಟ್ ಪಡೆದರು. ನಂತರ ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ (14) ಉಪಯುಕ್ತ ರನ್ ಸೇರಿಸಿ, ತಂಡದ ಮೊತ್ತವನ್ನು 210ಕ್ಕೇರಿಸಿದರು.
ಬಟ್ಲರ್ ಅರ್ಧಶತಕ
ಗುಜರಾತ್ ಟೈಟಾನ್ಸ್: 4 ವಿಕೆಟ್‌ಗೆ 210


Comments
Post a Comment