Skip to main content

ಮಕ್ಕಳ ರಕ್ಷಣಾ ಸಮಿತಿ ಕಡ್ಡಾಯ

 

ಮಕ್ಕಳ ರಕ್ಷಣಾ ಸಮಿತಿ ಕಡ್ಡಾಯ

ಕಾಲೇಜುಗಳಲ್ಲಿ ಹದಿಹರೆಯದವರ ಸುರಕ್ಷತೆಗೆ ಹಲವು ಶಿಫಾರಸು


ಶಾಲಾ- ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ, ಆಪ್ತ ಸಮಾಲೋಚಕರ ನೇಮಕ, ಪಾಲಕರು- ವಿದ್ಯಾರ್ಥಿಗಳ ಸಭೆ ಸೇರಿದಂತೆ ಹದಿಹರೆಯದ ವಿದ್ಯಾರ್ಥಿಗಳ ರಕ್ಷಣೆಗೆ ಕಾನೂನಾತ್ಮಕ ಹಾಗೂ ಮಾನಸಿಕ ಬಂಬಲ ವ್ಯವಸ್ಥೆಗಳನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗವು ಸೂಚಿಸಿದೆ. ಇದಲ್ಲದೆ, ಇನ್ನೂ ಹಲವು ಶಿಫಾರಸುಗಳನ್ನು ಮಾಡಿದೆ.


ಮಕ್ಕಳ ಹಕ್ಕು

ಆಯೋಗದ ನಿರ್ದೇಶನ ಪಾಲನೆಗೆ ಸೂಚನೆ


ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ಮಕ್ಕಳನ್ನು ದೌರ್ಜನ್ಯ, ಶೋಷಣೆ ಹಾಗೂ ಅಪಾಯಗಳಿಂದ ರಕ್ಷಿಸುವ ಸಂಬಂಧ ಈ ಶಿಫಾರಸು/ನಿರ್ದೇಶನಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.


ಕಾನೂನಾತ್ಮಕ ಹಾಗೂ ರಕ್ಷಣಾತ್ಮಕ ಕ್ರಮಗಳು, ಆಡಳಿತಾತ್ಮಕ ಹಾಗೂ ಸಾಂಸ್ಥಿಕ ಕ್ರಮಗಳು ಮತ್ತು ಮಾನಸಿಕ, ಸಾಮಾಜಿಕ ಬಂಬಲ ಕ್ರಮಗಳಿಂದ ಇವುಗಳನ್ನು ವಿಂಗಡಿಸಲಾಗಿದೆ.  ಆಯೋಗದ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಇಲಾಖೆ ಆಯುಕ್ತ ಎನ್. ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.


ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳಿಗೆ ಈ ಆದೇಶ ಅನ್ವಯಿಸಿದೆ.


ಕಾನೂನು ಮತ್ತು ರಕ್ಷಣಾತ್ಮಕ

  1.  ಪ್ರತಿ ಕಾಲೇಜಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಬೇಕು.  ಇದು 2016ರ ಮಕ್ಕಳ ರಕ್ಷಣಾ ನೀತಿಗೆ ಅನುಗುಣವಾಗಿರಬೇಕು.
  2.   ಪೋಕ್ಸೋ ಅಂಶಯ ಲೈಂಗಿಕ ಅತಿರಾಧದ ಯಾವುದೇ ಮಾಹಿತಿ ದೊರೆತ ತಕ್ಷಣ ಪೊಲೀಸ್ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಕಡ್ಡಾಯವಾಗಿ ವರದಿ ಮಾಡಬೇಕು.
  3. ವಿದ್ಯಾರ್ಥಿ, ಸಿಬ್ಬಂದಿಗೆ ನಡವಳಿಕೆ ಸಂಹಿತೆ ರೂಪಿಸಬೇಕು.
  4. ಎಲ್ಲ ಕಾಲೇಜುಗಳ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ- 1098, ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚಯದ ಚಿತ್ರಗಳನ್ನು ಪ್ರದರ್ಶಿಸಬೇಕು.


ಆಡಳಿತಾತ್ಮಕ

ಸಂಸ್ಥಾತ್ಮಕ ಕ್ರಮಗಳು


* ಪ್ರತಿ ಕಾಲೇಜಿನಲ್ಲಿ ಆರ್ಹ ಮಾನಸಿಕ ಆಪ್ತ ಸಮಾಲೋಚಕರ ನೇಮಕ ನಡಸಬೇಕು

* ಪ್ರತಿ ವರ್ಷ ಕನಿಷ್ಠ ಒಂದು ಬಾರಿ ಹದಿಹರೆಯದ ಆರೋಗ್ಯ, ಲೈಂಗಿಕ ಹುರಕ್ಷತೆ, ಆನ್ಲೈನ್ ಸುರಕ್ಷತೆ ಮತ್ತು ಹಾನುನು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು.

* ಎಲ್ಲ ಕಾಲೇಜುಗಳಲ್ಲೂ ಡಿಜಿಟಲ್ ಸಾಕ್ಷರತೆ ಹಾಗೂ ಸೈಬರ್ ಸುರಕ್ಷತಾ ನೀತಿ ಜಾರಿಗೊಳಿಸಬೇಕು.  ಮಕ್ಕಳ ಅಶ್ಲೀಲ ವಿಷಯ ಹಾಗೂ ಆನ್ಲೈನ್ ಶೋಷಣೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

* ಪ್ರತಿ ಸೆಮಿಸ್ಟರ್ಗೆ ಕನಿಷ್ಠ ಒಂದು ಬಾರಿ ಪಾಲಕರು- ವಿದ್ಯಾರ್ಥಿಗಳು ಹಾಗೂ ಕೌನ್ಸಿಲರ್ಗಳು ಸಭೆ ನಡೆಸುವುದು ಕಡ್ಡಾಯ.

* ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯದು  'ತಿರೇದ ಮನೆ' ಕಾರ್ಯಕ್ರಮದ ಅನುಷ್ಠಾನ ಮಾಡಿಸಬೇಕು.


ಮಾನಸಿಕ ಮತ್ತು ಸಾಮಾಜಿಕ ಬಂಬಲ


* ವಿದ್ಯಾರ್ಥಿಗಳಿಗೆ ಪರಸ್ಪರ ಮಾನಸಿಕ ಬಂಬಲದ ವ್ಯವಸ್ಥೆ ಒತ್ತಡ, ಆತಂಕ, ಡಿಪ್ರೆಶನ್ ಮತ್ತು ಆತ್ಮಹತ್ಯಾ ಪ್ರವೃತ್ತಿ ಪತ್ತೆಗೆ ನಿಯಮಿತ ಮಾನಸಿಕ ಆರೋಗ್ಯ ತಪಾಸಣೆ ನಡೆಸಬೇಕು.

* ಯುವಸ್ವಂದನ ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರ ನೆರವು

* ವಿದ್ಯಾರ್ಥಿಗಳಿಗೆ ದೂರು ಪೆಟ್ಟಿಗೆಗಳನ್ನು ನಿರ್ವಹಿಸಬೇಕು.

* ಮಕ್ಕಳ ಮಾನಸಿಕ ಸ್ಥಿತಿ ವಿಶ್ಲೇಷಣೆ, ಸ್ವಸ್ಥತಾ ಸಾಮರ್ಥ್ಯವನ್ನು ಉತ್ತಮಪಡಿಸಲು ಜೀವನ ಕೌಶಲ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು.


Read more

https://sanjuliger.blogspot.com/2026/04/2028.html

Comments

Popular posts from this blog

ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ

 ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ( IIM ) ಸಂಸ್ಥೆಯು “ಅಕಾಡೆಮಿಕ್ ಅಸೋಸಿಯೇಟ್” ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಕೆಲಸ, ಸಂಶೋಧನಾ ಕಾರ್ಯ, ಡೇಟಾ ವಿಶ್ಲೇಷಣೆ, ತರಗತಿ ನಿರ್ವಹಣೆ ಹಾಗೂ ವಿದ್ಯಾರ್ಥಿ ಸಂಬಂಧಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಈಗ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ನೋಡೋಣ. 1. ಸಂಸ್ಥೆಯ ಹೆಸರು ಈ ನೇಮಕಾತಿಯನ್ನು ನಡೆಸುತ್ತಿರುವ ಸಂಸ್ಥೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM Bangalore) ಇದು ಭಾರತದ ಪ್ರಮುಖ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಕೆಲಸ ಮಾಡುವುದರಿಂದ ಉತ್ತಮ ಅನುಭವ ಹಾಗೂ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಬಹುದು. 2. ಹುದ್ದೆಯ ಹೆಸರು ನೇಮಕಾತಿಯ ಹುದ್ದೆ: ಅಕಾಡೆಮಿಕ್ ಅಸೋಸಿಯೇಟ್ ( Academic Associate) ಈ ಹುದ್ದೆಯಲ್ಲಿ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸಬೇಕು. 3. ಹುದ್ದೆಗಳ ಸಂಖ್ಯೆ ಜಾಹೀರಾತಿನ ಪ್ರಕಾರ ಹಲವು ಹುದ್ದೆಗಳು ಖಾಲಿ ಇದ್ದು, ವಿಭಾಗಗಳ ಅವಶ್ಯಕತ...

ಗೆಲ್ಲುವ ಛಲದಲ್ಲಿ ಮುಂಬೈ ಇಂಡಿಯನ್ಸ್

 ಗುವಾಹಟಿ (ಪಿಟಿಐ): ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. ಗೆಲುವಿನ ಹಾದಿಗೆ ಮರಳುವ ಛಲದಲ್ಲಿರುವ ಮುಂಬೈ ತಂಡದ ನಾಯಕ ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದಿಂದ ಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಗರಿಗೆದರಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡವು ಜಯಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಆಡಿರಲಿಲ್ಲ. ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮುಂದಾಳತ್ವ ವಹಿಸಿದ್ದರು. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತಂಡವೂ ಸೋತಿತ್ತು. + ಕಳೆದ ಪಂದ್ಯದಲ್ಲಿ ಹಾರ್ದಿಕ್ ಬದಲಿಗೆ ಅಲ್‌ರೌಂಡರ್ ದೀಪಕ್ ಚಾಹ‌ರ್ ಅವರನ್ನು ಅಡಿಸಲಾಯಿತು. ಅವರು ಉತ್ತಮ ಬೌಲಿಂಗ್‌ ಮಾಡಿದರು. ಆದರೆ ಎಡಗೈ ವೇಗಿ ಟ್ರೆಂಟ್ ಬೌಲ್ಸ್ ಬದಲಿಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಕಣಕ್ಕಿಳಿಸಿದ್ದು ಮುಂಬೈಗೆ ತಿರುಗುಬಾಣವಾಯಿತು. ಅವರು ಹೆಚ್ಚು ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಶಾರ್ದೂಲ್ ಠಾಕೂ‌ರ್ ಕೂಡ ಹೆಚ್ಚು ರನ್ ಕೊಟ್ಟಿದ್ದರು. ಜಸ್‌ಪ್ರೀತ್ ಬೂಮ್ರಾ ಬಿಗಿದಾಳಿ ನಡೆಸಿದ್ದರು. ಆದರೆ ವಿಕೆಟ್ ಪಡೆದಿರಲಿಲ್ಲ. ಅದರಿಂದಾಗಿ ಮಧ್ಯ-ಮವೇಗಿಯೊಬ್ಬರ ಅಗತ್ಯ ತಂಡಕ್ಕೆ ಇದೆ. ಅದಕ್ಕಾಗಿಯೇ ಈಗ ಮುಂಬೈ ಬಳಗದ ಮ್ಯಾನೇಜ್‌ಮೆಂಟ್ ಚಿತ್ತ ಹಾರ್ದಿಕ್ ಅವರತ್ತ ಇದೆ. ಪಾಂಡ್ಯ ತಂಡದೊಂದಿಗೆ ಗುವಾಹಟಿಗೆ ಬಂದಿದ್ದಾರೆ. ನೆಟ್‌ನಲ್ಲಿಯೂ ಒಂದಿ...

ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ

 ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ ಭಾರತದ ಪ್ರಮುಖ ಗಣಿಗಾರಿಕಾ ಸಂಸ್ಥೆಯಾದ ಎನ್‌ಎಂಡಿಸಿ (NMDC) ಸಂಸ್ಥೆಯಲ್ಲಿ ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ, ಸ್ಥಿರ ಉದ್ಯೋಗ ಹಾಗೂ ಸರ್ಕಾರಿ ಸೌಲಭ್ಯಗಳ ಕಾರಣದಿಂದ ಸಾವಿರಾರು ಅಭ್ಯರ್ಥಿಗಳು ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದ್ದರಿಂದ ಅಭ್ಯರ್ಥಿಗಳು ಸರಿಯಾದ ಮಾಹಿತಿಯನ್ನು ತಿಳಿದು ಹಂತ ಹಂತವಾಗಿ ಅರ್ಜಿ ಸಲ್ಲಿಸುವುದು ಬಹಳ ಮುಖ್ಯವಾಗಿದೆ. ಹಂತ 1: ನೇಮಕಾತಿ ಅಧಿಸೂಚನೆ ಓದುವುದು ಮೊದಲಿಗೆ ಅಭ್ಯರ್ಥಿಗಳು ಎನ್‌ಎಂಡಿಸಿ ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು. ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಧಿಸೂಚನೆಯನ್ನು ಸರಿಯಾಗಿ ಓದದೇ ಅರ್ಜಿ ಸಲ್ಲಿಸಿದರೆ ನಂತರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಬೇಕು. ಹಂತ 2: ಅರ್ಹತೆ ಪರಿಶೀಲನೆ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಮೆಕ್ಯಾನಿಕಲ್, ಸಿವಿಲ...