ಸನ್‌ರೈಸರ್ರನ 157 ರನ್ ಸವಾಲಿಗೆ ಪ್ರತಿಯಾಗಿ
ಲಖನೌ 156 ರನ್ ಗಳಿಸಿ ಟೈ ಸಾಧಿಸಿದ್ದಾಗ ಕೊನೇ 2 ಎಸೆತಗಳಲ್ಲಿ ಗೆಲುವಿಗೆ 1 ರನ್ ಮಾತ್ರ ಬೇಕಾಗಿತ್ತು. ಆಗ ಉನಾದ್ಮತ್ ಎಸೆತದಲ್ಲಿ ನಾಯಕ ರಿಷಭ್ ಪಂತ್ ಹೊಡೆದ ಚೆಂಡು ಮಿಡ್‌ಆಫ್ ಕಡೆ ಬೌಂಡರಿಯತ್ತ ಹೋಯಿತು. ಆದರೆ ಚೆಂಡು ಬೌಂಡರಿ ಗೆರೆ ದಾಟುವ ಮುನ್ನವೇ ಡಗೌಟ್ ಹೊರಗೆ ಬ್ಯಾಟ್‌ನೊಂದಿಗೆ ನಿಂತಿದ್ದ ಆವೇಶ್ ಖಾನ್, ಚೆಂಡನ್ನು ಹೊಡೆದು AVRRA SIs ಮತ್ತೆ ಮೈದಾನದೊಳಗೆ ಕಳುಹಿಸಿದ್ದರು. ಆದರೂ ಅಂಪೈರ್ ಅದನ್ನು ಬೌಂಡರಿ ಎಂದು ಪರಿಗಣಿಸಿ ಲಖನೌ ಗೆಲುವು ಸಾಧಿಸಿದ್ದರು. ಆದರೆ ಆವೇಶ್ ರ ಈ ವರ್ತನೆ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ನೀಡಿಲ್ಲ. ಜತೆಗೆ ಈ ಸಂಬಂಧ ಸನ್‌ರೈಸರ್ಸ್ ತಂಡ ಐಪಿಎಲ್ ಆಡಳಿತ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಆವೇಶ್ ವಿರುದ್ಧ ಬಿಸಿಸಿಐ ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
Comments
Post a Comment