ಇಂದು ಆರ್‌ಸಿಬಿ-ಮುಂಬೈ ಮುಖಾಮುಖಿ
ವಾಂಖೆಡೆಯಲ್ಲಿ ಗೆಲುವಿನ ಹಠಿಗೆ ಮರಳಲು ಉಭಯ ತಂಡಗಳ ಕಾದಾಟ
ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲಿನ ಹಿನ್ನಡೆಯಿಂದ ಎದುರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಆಸ್ಟ್ರೇಲಿಯನ್ ನಿರ್ವಹಣೆಯಿಂದ ಬಲಲುತ್ತಿರುವ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-19ನೇ ಅವೃತ್ತಿಯಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಹಠಿಗೆ ಮರಳುವ ಹಂಬಲದಿಂದ ಕಣಕ್ಕಿಳಿಯಲಿವೆ.
14 ವರ್ಷಗಳ ನಂತರ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದ ಮುಂಬೈ ಇಂಡಿಯನ್ಸ್ ನಂತರ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ತವರಿನ ಅಂಗಳದಲ್ಲಿ ಕಂಬ್ಯಾಕ್ ಮಾಡುವ ನಿಂತು ಹೊಂದಿದೆ. ಇದುವರಗೆ 3 ಪಂದ್ಯ ಆಡಿರುವ ಮುಂಬೈ ತನ್ನ ಹಿಂದಿನ ಮಳೆಬಾಧಿತ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಚೇಸಿಂಗ್‌ನಲ್ಲಿ ಮುಗ್ಗರಿಸಿತ್ತು. ಚೇಸಿಂಗ್‌ನಲ್ಲಿ ಎದುರಿರುವ ಮುಂಬೈ ಬ್ಯಾಟಿಂಗ್ ಸುಧಾರಣೆ ಜತೆಗ ಬೌಲಿಂಗ್ ಸುಧಾರಣೆಯೂ ನಿರ್ಣಾಯಕ ಎನಿಸಿದೆ. ಆರಂಭಿಕ ಎರಡು ಪಂದ್ಯ ಗೆದ್ದ ಜೋಶ್‌ನಲ್ಲಿದ್ದ ಆರ್‌ಸಿಬಿ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿರುದು ಎಚ್ಚರಿಕೆಯ ಕರೆಎನಿಸಿದೆ. ಹೀಗಾಗಿ ಈ ಬಾರಿ ಹರ್ಡಿಕ್ ಪಾಂಡ್ಯ ಬಳಗವನ್ನು ಆದರೇ ನೆಲದಲ್ಲೇ ಮಣಿಸಲು ರಜತ್ ಪಾಟೀದಾರ್ ಪಡೆ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವಾಗಿದೆ. ಕಳೆದ ಬಾರಿ ಎದುರಾಳಿ ಆಂಗಣದಲ್ಲಿ ಎಲ್ಲ ಪಂದ್ಯ, ಜಯಿಸಿದ್ದ ಆರ್‌ಸಿಬಿ, ಈ ಬಾರಿ ತವರಿನಾಚೆ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವುದು ಮಾನಸಿಕ ಬಲ ಕುಸಿಗಿದೆ. ಮುಂಬೈ ಬ್ಯಾಟರ್‌ಗಳ ವೈಫಲ್ಯವನ್ನು ಆರ್‌ಸಿಬಿ ಸದುಪಯೋಗಪಡಿಸಿಕೊಂಡರೆ ಗೆಲುವಿನ ಹಠಿಗೆ ಮರಳುವ ಅವಕಾಶವೂ ಇದೆ. ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ವಿಕೆಟ್ ಪಡೆಯುವಲ್ಲಿ ವಿಫಲವಾಗುತ್ತಿರುವುದು ಮುಂಬೈ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದೆ.
ಮುಖಾಮುಖಿ: 34
ಆರ್‌ಸಿಬಿ: 15 ಮುಂಬೈ: 19
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಬ್ಯಾಟಿಂಗ್ ವೈಫಲ್ಯ
ಕಾಗದದ ಮೇಲೆ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಮುಂಬೈ ಇದುವರೆಗೆ ಟೂರ್ನಿಯಲ್ಲಿ ಅಬ್ಬರಿಸಲು ವಿಫಲವಾಗಿದೆ. ರೋಹಿತ್ ಶರ್ಮ, ರ್ಯಾನ್ ರಿಕೆಲ್ಟನ್ ಉತ್ತಮ ಆರಂಭ ಒದಗಿಸಿದರೂ, ಸೂರ್ಯಕುಮಾರ್, ತಿಲಕ್ ವರ್ಮ ಆಸ್ಟ್ರೇಲಿಯನ್ ನಿರ್ವಹಣೆ ಹಿನ್ನಡೆ ಎನಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಹಾಗೂ ತಿಲಕ್ ವರ್ಮ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸದಿರಪಟ್ಲೇ ಆರ್ ಸಿಬಿಗೆ ಸವಾಲೆಸೆಯಬಹುದಾಗಿದೆ. ವಾಂಖೆಡೆಯಲಲಿ ಉತ್ತಮ ದಾಖಲೆ ಹೊಂದಿರುವ ಸೂರ್ಯಕುಮಾರ್ ಜತೆಗೆ ಮುಂಬೈನ ಇತರ ಬ್ಯಾಟರ್‌ಗಳು ಲಯ ಕಂಡುಕೊಂಡರೆ ಆರ್‌ಸಿಬಿ ಬೌಲರ್‌ಗಳಿಗೆ ಸತ್ವಪರೀಕ್ಷೆ ಎದುರಾಗಲಿದೆ.
ಸಾಲ್ಟ್ ಬದಲಿಗೆ ಬಿಥೆಲ್?
ಆಡಿರುವ 3 ಪಂದ್ಯಗಳಲ್ಲಿ 54 ರನ್ ಮಾತ್ರ ಗಳಿಸಿದ್ದ, ರನ್ ಬರ ಎದುರಿಸುತ್ತಿದ್ದ ಸಾಲ್ಟ್ ಇದುವರೆಗೆ ಬರ ಎದುರಿಸುತ್ತಿದ್ದಾರೆ. ಸಾಲ್ಟ್ ಬದಲಿಗೆ ಇಂಗ್ಲೆಂಡ್ ಜೀಕಬ್ ಬಿಥೆಲ್‌ಗೆ ಅವಕಾಶ ನೀಡಿದರೆ, ಆರ್‌ಸಿಬಿಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ದುಬಾರಿ ಆಗಿರುವ ಅಭಿನಂದನ್ ಸಿಂಗ್ ಬದಲಿಗೆ ಮಂಗೇಶ್ ಯಾದವ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

Comments
Post a Comment